Showing posts with label ಅನುರಾಗ. Show all posts
Showing posts with label ಅನುರಾಗ. Show all posts

Monday, September 12, 2016

ಅಭಿಮಾನವೇ ಅಭಿನಂದನ

ಅಭಿಮಾನವೇ ಅಭಿನಂದನ
ಅಭಿಲಾಷವೇ ಅಭ್ಯುದಯವು
ಅನುರಾಗವೇ ಅನುಬಂಧವು
ಕರ್ನಾಟಕ ರಾಜ್ಯದ ಜೀವನೆ ಮಹಾ ಸಂಭಾಷಣವು ಮಹೋದಯವು || ಅಭಿಮಾನವೇ ||

ಎಲ್ಲೆಲ್ಲಿ ಹೋಗಲಿ ಜನ ಸಂಗ್ರಾಮದ ಅಭಿಮಾನ ಅಭಿಲಾಷವು
ಎಲ್ಲೆಲ್ಲಿ ನೋಡಲಿ ಜನ ಚೈತನ್ಯದ ಅನುರಾಗ ಅನುಬಂಧವು

ನಮ್ಮ ಅಭಿಮಾನಕ್ಕೆ ಕರ್ನಾಟಕ ಮಹಾಕ್ಷೇತ್ರವು
ನಮ್ಮ ಅಭ್ಯುದಯಕ್ಕೆ ಕನ್ನಡ ರಾಜ್ಯ ಸ್ವರಾಜ್ಯವು  || ಅಭಿಮಾನವೇ ||

ಅಭಿಮಾನದ ಜೀವನ ಮರಿಯಲಾರದ ಸಂಬಂಧವು
ಅಭಿಲಾಷದ ಜೀವಿತ ಮಹಾನಂದದ ಪ್ರೀತಿ ಸ್ವರೂಪವು

ನಮ್ಮ ದೇಶಕ್ಕೆ ಕರ್ನಾಟಕ ಮಾರ್ಗದರ್ಶಕವಾಗಿ ಇರುಬೇಕಾಗಿದೆ
ನಮ್ಮ ವಿಶ್ವಕ್ಕೆ ಕನ್ನಡ ಜ್ಞಾನ ಪ್ರಜಾನಾಡು ಮೂಲಾಧಾರವಾಗಿದೆ  || ಅಭಿಮಾನವೇ ||