Monday, December 12, 2016

ಏ ಈಶ್ವರ ಪರಮೇಶ್ವರ ಎಲ್ಲಿ ನಿನ್ನ ರೂಪ ಪ್ರದೇಶವು

ಏ ಈಶ್ವರ ಪರಮೇಶ್ವರ ಎಲ್ಲಿ ನಿನ್ನ ರೂಪ ಪ್ರದೇಶವು
ಏ ಶಂಕರ ಶಿವ ಶಂಕರ ಎಲ್ಲಿ ನಿನ್ನ ಮಹಾ ರೂಪ ಧ್ಯಾನವು
ಪ್ರತಿ ಜೀವಿಗೆ ನೀನೆ ರೂಪವು ಪ್ರತಿ ರೂಪಗೆ ನೀನೆ ಕಾರ್ಯವು
ಪ್ರತಿ ಲಯ ಕಾರ್ಯಗೆ ನೀನೆ ಮಹಾ ಕಾರಣದ ಕರ್ತ ದೇಹವು  || ಏ ಈಶ್ವರ ||

ವಿಜ್ಞೇಶ್ವರಾ ...  ನನ್ನಲ್ಲಿ ನೀನೆ ಜ್ಞಾನೇಶ್ವರಾ
ಗಂಗೇಶ್ವರಾ ...  ನನ್ನಲ್ಲಿ ನೀನೆ ನಾರೀಶ್ವರಾ
ಮುನೀಶ್ವರಾ ...  ನನ್ನಲ್ಲಿ ನೀನೆ ಮುಕ್ತೇಶ್ವರಾ
ಧರ್ಮೇಶ್ವರಾ ...  ನನ್ನಲ್ಲಿ ನೀನೆ ಸತ್ಯೇಶ್ವರಾ
ಮೇಘೇಶ್ವರಾ ...  ನನ್ನಲ್ಲಿ ನೀನೆ ಮಹೇಶ್ವರಾ
ಸರ್ವೇಶ್ವರಾ ...  ನನ್ನಲ್ಲಿ ನೀನೆ ಪ್ರಾಣೇಶ್ವರಾ
ಲೋಕೇಶ್ವರಾ ...  ನನ್ನಲ್ಲಿ ನೀನೆ ವಿಶ್ವೇಶ್ವರಾ
ಜಗದೀಶ್ವರಾ ...   ನನ್ನಲ್ಲಿ ನೀನೆ ನಿತ್ಯೇಶ್ವರಾ
ಪರಮೇಶ್ವರಾ ...  ನನ್ನಲ್ಲಿ ನೀನೆ ಜೀವೇಶ್ವರಾ  || ಏ ಈಶ್ವರ ||

ಸಿದ್ದೇಶ್ವರಾ ...  ನನ್ನಲ್ಲಿ ನೀನೆ ವರಸಿದ್ಧೇಶ್ವರಾ
ಬಸವೇಶ್ವರಾ ... ನನ್ನಲ್ಲಿ ನೀನೆ ಬೃಹದೇಶ್ವರಾ
ನಂದೀಶ್ವರಾ ...  ನನ್ನಲ್ಲಿ ನೀನೆ ಮಹದೇಶ್ವರಾ
ನವದೀಶ್ವರಾ ... ನನ್ನಲ್ಲಿ ನೀನೆ ಕಾರ್ಯೇಶ್ವರಾ
ಜ್ಯೋತೀಶ್ವರಾ ...  ನನ್ನಲ್ಲಿ ನೀನೆ ತೇಜೇಶ್ವರಾ
ಕಮಲೇಶ್ವರಾ ...  ನನ್ನಲ್ಲಿ ನೀನೆ ಕಳಾದೇಶ್ವರಾ
ಕರುಣೇಶ್ವರಾ ...  ನನ್ನಲ್ಲಿ ನೀನೆ ಕಾರುಣ್ಯೇಶ್ವರಾ
ಓಂಕಾರೇಶ್ವರಾ ... ನನ್ನಲ್ಲಿ ನೀನೆ ಲಯಕಾರೇಶ್ವರಾ
ಸೋಮೇಶ್ವರಾ ...  ನನ್ನಲ್ಲಿ ನೀನೆ ನೀಲಕಂಠೇಶ್ವರಾ  || ಏ ಈಶ್ವರ ||

Tuesday, November 1, 2016

ತಂದೆ ತಾಯಿಯ ಸಮ ಭಾವನವೇ ನಮ್ಮಗೆ ಆಶೀರ್ವಾದವು

ತಂದೆ ತಾಯಿಯ ಸಮ ಭಾವನವೇ ನಮ್ಮಗೆ ಆಶೀರ್ವಾದವು
ಅತ್ತೆ ಮಾಮನ ಸಮ ಭಾವನವೇ ನಮ್ಮಗೆ ಸಂಸ್ಕಾರವಾದವು  || ತಂದೆ ತಾಯಿಯ ||

ತಂದೆ ತಾಯಿಯ ಆದೇಶಕ್ಕೆ ಜೀವಿತ ಸಂಸ್ಕಾರವಾದವು
ಅತ್ತೆ ಮಾಮನ ಆದೇಶಕ್ಕೆ ಜೀವನ ಸಮನ್ವಯವಾದವು
ಬಂಧು ಮಿತ್ರಗಳ ಆದೇಶಕ್ಕೆ ಕಲ್ಯಾಣ ಸಮಯವಾದವು || ತಂದೆ ತಾಯಿಯ ||

ಮಾತೃದೇವೋ ಭವ ಪಿತೃದೇವೋ ಭವ ನಮ್ಮ ಸತ್ಯ ವಾಕ್ಯಗಳು
ಆಚಾರ್ಯದೇವೋ ಭವ ಅತಿಥಿದೇವೋ ಭವ ನಮ್ಮ ಹಿತ ವಾಕ್ಯಗಳು
ಧೀರ್ಘ ಸುಮಂಗಳೀ ಭವ ದೀರ್ಗಾಯೀಶ್ಮಾನ್ ಭವ ನಮ್ಮ ಕಲ್ಯಾಣ ಶುಭಾಶಯಗಳು  || ತಂದೆ ತಾಯಿಯ ||

Wednesday, September 14, 2016

ವಿಜ್ಞೇಶ್ವರ ವಿನಾಯಕ ಶ್ರೀ ಗಣನಾದೇಶ್ವರ

ವಿಜ್ಞೇಶ್ವರ ವಿನಾಯಕ ಶ್ರೀ ಗಣನಾದೇಶ್ವರ
ವಿಶ್ವೇಶ್ವರ ವಿನಾಯಕ ಶ್ರೀ ಗಜನಾದೇಶ್ವರ
ಜಯಹೋ ನಾಯಕ ಶ್ರೀ ಜಯ ಜಯ ಜಯಹೋ ಜಯ ವಿನಾಯಕ  || ವಿಜ್ಞೇಶ್ವರ ||

ವಿನಾಯಕ ಚವಿತಿ ಉತ್ಸವ ವಿನಾಯಕನ ನಿಮಜ್ಜನ ಮಹೋತ್ಸವ
ವಿನಾಯಕ ಚರಿತ್ರ ಮಾಹಿತಿ ವಿಜ್ಞಾನ ವಂತರ ಭೋದನ ಸಾಹಿತಿ  || ವಿಜ್ಞೇಶ್ವರ ||

ವಿಜಯವೇ ವಿಜ್ಞಾನ ವಿಜ್ಞೇಶ್ವರ ಕೃಪಾ ಕಟಾಕ್ಷವೇ ವರ ಸಿದ್ಧೇಶ್ವರ
ಮಹಾ ವಿಜಯೋತ್ಸವ ಬಹು ಮಹೋತ್ಸವ ಮೂಷಿಕ ರಥೋತ್ಸವ  || ವಿಜ್ಞೇಶ್ವರ || 

Tuesday, September 13, 2016

ನೀನಾದರೇನು ನಾನಾದರೇನು ನೀನು ನಾನು ಒಂದಾಗಿ ಜೀವನ ನಡಿಸೋದೇ

ನೀನಾದರೇನು ನಾನಾದರೇನು ನೀನು ನಾನು ಒಂದಾಗಿ ಜೀವನ ನಡಿಸೋದೇ
ನಾನಾದರೇನು ನೀನಾದರೇನು ನೀನು ನಾನು ಎಂಗಿದ್ದರು ಜೀವಿತ ನಡಿಯೋದೆ  || ನೀನಾದರೇನು ||

ನಮ್ಮ ಜೀವ ನಡಿಯೋದಕ್ಕೆ ಏನಾದರೂ ಇರುಬೋದು ಸೂತ್ರಗಳು
ನಮ್ಮ ಶ್ವಾಸ ಉಸಿರಾಡಕ್ಕೆ ಏನಾದರೂ ಇರುಬೋದು ಸೂಚನಗಳು

ನಮ್ಮ ಜೀವದಲ್ಲಿ ನಮ್ಮ ಶ್ವಾಸದಲ್ಲಿ ಏನೋ ಒಂತರ ಭಾವ ಸ್ವಭಾವ ಇದೆ
ನಮ್ಮ ದೇಹದಲ್ಲಿ ನಮ್ಮ ಹೃದಯದಲ್ಲಿ ಏನೋ ಒಂತರ ಧ್ಯಾಸ ಅಭ್ಯಾಸ ಇದೆ  || ನೀನಾದರೇನು ||

ನಮ್ಮ ವೇದಾಂತ ಹಿತಿಹಾಸದ ಪ್ರಜ್ಞಾನ ಕಲಿಯಲು ಉತ್ಕಂಠ ವಾಗಿದೆ
ನಮ್ಮ ಪ್ರಕೃತಿ ಮೇಧಾಶಕ್ತಿಯ ವಿಜ್ಞಾನ ನೋಡಿಸಲು ಉದ್ಯಾನ ವಾಗಿದೆ

ನಮ್ಮ ಹೆಚ್ಚಿನ ಮಾಹಿತಿ ಮುಖ್ಯ ಪಾತ್ರವನ್ನು ತೋರಿಸಿದರು ಪ್ರಯೋಜನ ಉದ್ದಾರವಾಗಿದೆ
ನಮ್ಮ ಕಡಿಮ ಮಾಹಿತಿ ಅಲ್ಪ ಪ್ರಭಾವವನ್ನು ಸೂಚಿಸಿದರು ಅನುಭವ ಪ್ರಯೋಜನವಾಗಿದೆ  || ನೀನಾದರೇನು || 

Monday, September 12, 2016

ಅಭಿಮಾನವೇ ಅಭಿನಂದನ

ಅಭಿಮಾನವೇ ಅಭಿನಂದನ
ಅಭಿಲಾಷವೇ ಅಭ್ಯುದಯವು
ಅನುರಾಗವೇ ಅನುಬಂಧವು
ಕರ್ನಾಟಕ ರಾಜ್ಯದ ಜೀವನೆ ಮಹಾ ಸಂಭಾಷಣವು ಮಹೋದಯವು || ಅಭಿಮಾನವೇ ||

ಎಲ್ಲೆಲ್ಲಿ ಹೋಗಲಿ ಜನ ಸಂಗ್ರಾಮದ ಅಭಿಮಾನ ಅಭಿಲಾಷವು
ಎಲ್ಲೆಲ್ಲಿ ನೋಡಲಿ ಜನ ಚೈತನ್ಯದ ಅನುರಾಗ ಅನುಬಂಧವು

ನಮ್ಮ ಅಭಿಮಾನಕ್ಕೆ ಕರ್ನಾಟಕ ಮಹಾಕ್ಷೇತ್ರವು
ನಮ್ಮ ಅಭ್ಯುದಯಕ್ಕೆ ಕನ್ನಡ ರಾಜ್ಯ ಸ್ವರಾಜ್ಯವು  || ಅಭಿಮಾನವೇ ||

ಅಭಿಮಾನದ ಜೀವನ ಮರಿಯಲಾರದ ಸಂಬಂಧವು
ಅಭಿಲಾಷದ ಜೀವಿತ ಮಹಾನಂದದ ಪ್ರೀತಿ ಸ್ವರೂಪವು

ನಮ್ಮ ದೇಶಕ್ಕೆ ಕರ್ನಾಟಕ ಮಾರ್ಗದರ್ಶಕವಾಗಿ ಇರುಬೇಕಾಗಿದೆ
ನಮ್ಮ ವಿಶ್ವಕ್ಕೆ ಕನ್ನಡ ಜ್ಞಾನ ಪ್ರಜಾನಾಡು ಮೂಲಾಧಾರವಾಗಿದೆ  || ಅಭಿಮಾನವೇ || 

Thursday, September 1, 2016

ಮಳೆ ಮಹದೇಶ್ವರ ಮಹಾ ನಂದೀಶ್ವರ

ಮಳೆ ಮಹದೇಶ್ವರ ಮಹಾ ನಂದೀಶ್ವರ
ಮಹಾ ಮಹೇಶ್ವರ ಮಹಾ ಪರಮೇಶ್ವರ
ಮಳೆ ಮೇಘೇಶ್ವರ ಮಹಾ ಲೋಕೇಶ್ವರ   || ಮಳೆ ಮಹದೇಶ್ವರ ||

ಈ ಜಗತಿ ನಿನ್ನ ರೂಪ ಈ ವಿಶ್ವ ನಿನ್ನ ಪ್ರತಿರೂಪ
ಈ ದೇಹ ನಿನ್ನ ಭಾವನೆ ಈ ಶ್ವಾಸ ನಿನ್ನ ತತ್ವವೇ
ಈ ಭೂಲೋಕ ಮಂದಿರ ನಮ್ಮ ಜೀವನ ಚದರಂಗ
ಈ ಲೋಕದ ಕುಟೀರ ನಮ್ಮ ಜೀವಿತಗೆ ಸೌಲಭ್ಯವು  || ಮಳೆ ಮಹದೇಶ್ವರ ||

ನಿನ್ನ ತಂತ್ರ ಮಂತ್ರ ಜೀವನಗೆ ಮಹೋದಯ
ನಿನ್ನ ಭಾವ ಜೀವ ಜೀವಿತಗೆ ಮಹಾ ಸುಂದರ
ನಿನ್ನ ಶ್ವಾಸ ಧ್ಯಾಸವು ದೇಹಗೆ ಶುಭೋದಯ
ನಿನ್ನ ಆತ್ಮ ಪರಮಾತ್ಮ ಮಹಾತ್ಮಗೆ ನವೋದಯ  || ಮಳೆ ಮಹದೇಶ್ವರ ||

Wednesday, July 20, 2016

ನೀನು ನಾನು ಒಂದಾಗಿ ಇರುವ ಕ್ಷಣವೇ ಸುಂದರಾ

ನೀನು ನಾನು ಒಂದಾಗಿ ಇರುವ ಕ್ಷಣವೇ ಸುಂದರಾ
ನೀನು ನಾನು ಜೊತೆಯಾಗಿ ಇರುವ ಸಮಯವೇ ಮಧುರಾ  || ನೀನು ನಾನು ||

ನೀನು ಎಲ್ಲೆಲ್ಲಿ ಇರಲಿ ನಾನು ನಿನಗಾಗಿ ನೆನಪಲ್ಲಿ ಬರಲಿ
ನೀನು ಎಲ್ಲೆಲ್ಲಿ ಹೋಗಲಿ ನಾನು ನಿನಗಾಗಿ ಕಾಯುತ್ತಿರುವೆ

ನೀನು ನನ್ನಲ್ಲೇ ಸುಖವಾಗಿ ಇರಲಿ ನನ್ನಿಂದಲೇ ಆನಂದವಾಗಿ ಸಾಗಲಿ
ನೀನು ನನ್ನಲ್ಲೇ ಸುಂದರವಾಗಿ ಇರಲಿ ನನ್ನಿಂದಲೇ ಸಂಪೂರ್ಣ ಆಗಲಿ  || ನೀನು ನಾನು ||

ನಿನಗಾಗಿ ನಾನು ಎಲ್ಲಿಂದೋ ಬಂದು ಮನಸಲ್ಲೇ ಜೊತೆ ಆಗಿದಿನೆ
ನನಗಾಗಿ ನೀನು ನನ್ನ ಹೃದಯದಲ್ಲಿ ಒಪ್ಪಿಕೇ ಆಗಿ ಹಾಗೆ ಸೇರಿದೆ

ನಮ್ಮ ಹೊಸ ಜೀವನ ಹೊಸ ಬಂಧನ ಜಗತಿಗೆ ಹೊಸ ಭಾವನ
ನಮ್ಮ ಹೊಸ ಜೀವಿತ ಹೊಸ ಬೆಳಕು ವಿಶ್ವಕ್ಕೆ ನವ ಆಲೋಚನ   || ನೀನು ನಾನು || 

ಸುಗಂಧದ ಪುಷ್ಪ ಅರಳಿದೆ ಸುಮದುರ ಹೂವು ಆವರಿಸುವೆ

ಸುಗಂಧದ ಪುಷ್ಪ ಅರಳಿದೆ ಸುಮದುರ ಹೂವು ಆವರಿಸುವೆ
ಮಕರಂದದ ಮಧುರ ಮೋಹನ ಶ್ರೀಗಂಧ ಸುಂದರವಾಗಿದೆ  || ಸುಗಂಧದ ||

ಸುಂದರ ಗಂಧದ ಸುವಾಸನೆ ಇಂಪಾಗಿ ತಲೆ ಸುತ್ತಿರುವೆ
ಚಂದದ ಗಂಧ ಶ್ರೀಗಂಧ ಸಿಂಧೂರದ ಸಿತಾರಿನ ಚಲುವೆ

ವಿಶ್ವದ ಗಂಧ ಜಗತ್ತಲ್ಲಿ ಇರುವಾಗ ಸಂಪಂಗಿ ಹೂವು ಸುಗಂಧವೆ
ಹೂವು ದೇಹ ಒಳಗಿರುವ ಕುಸುಮ ಪರಿಮಳವಾಗಿ ಆವರಿಸುವೆ   || ಸುಗಂಧದ ||

ಸುಗಂಧ ಇಂದ ಜೀವ ನಾದವಾಗಿ ಜೀವನ ಉತ್ತೇಜವಾಗಿದೆ
ಗಂಧದ ಗಾಲಿ ಪ್ರಕೃತಿಯಲ್ಲಿ ಬೀಸುವಾಗ ಎಸ್ಟೋ ಇಷ್ಟವಾಗಿದೆ

ಹೊರಗೆ ಇಂದ ಮಂದಿರವನ್ನು ತುಂಬಿ ಸೇರಿದ ಗಂಧ ರಮ್ಯವಾಗಿದೆ
ಹೂವಿನ ಸುವಾಸನ ಒಳವಿನ ಸುಗಂಧ ಸ್ಪರ್ಷಕ್ಕೆ ಶ್ರೀಮಂತವಾಗಿದೆ  || ಸುಗಂಧದ || 

Monday, July 18, 2016

ಶ್ರೀ ರಾಘವೇಂದ್ರ ಗುರು ರಾಘವೇಂದ್ರ ಸದ್ಗುರು ಶ್ರೀ ಶ್ರೀರಾಘವೇಂದ್ರ

ಶ್ರೀ ರಾಘವೇಂದ್ರ ಗುರು ರಾಘವೇಂದ್ರ ಸದ್ಗುರು ಶ್ರೀ ಶ್ರೀರಾಘವೇಂದ್ರ
ಶ್ರೀ ರಾಘವೇಂದ್ರ ಭವ ರಾಘವೇಂದ್ರ ಜಗದ್ಗುರು ಶ್ರೀ ಶ್ರೀರಾಘವೇಂದ್ರ  || ಶ್ರೀ ರಾಘವೇಂದ್ರ ||

ವೇದ ರಾಗ ಜೀವ ನವ ಜೀವನ ಜನ್ಮ ಧ್ಯಾನ ಶ್ರೀ ರಾಘವೇಂದ್ರ
ಭವ್ಯ ಭೋಗ ಯೋಗ ರಾಗ ನವ ಜೀವನ ಗಾನ ಶ್ರೀ ರಾಘವೇಂದ್ರ

ವಿಶ್ವ ಧ್ಯಾನ ಸರ್ವ ಜ್ಞಾನ ವಿಜ್ಞಾನ ನಿಲಯ ಶ್ರೀ ರಾಘವೇಂದ್ರ
ಜಗತ್ ಲೋಕ ಸೂರ್ಯ ಕಿರಣ ಸ್ಥಾನ ಧ್ಯಾನ ಶ್ರೀ ರಾಘವೇಂದ್ರ   || ಶ್ರೀ ರಾಘವೇಂದ್ರ ||

ಭಾವ ಪೂರ್ಣ ಪೂಜಾ ಧಾತ್ರಿ ಸುಗಂಧ ಸುಮಿತ್ರ ಶ್ರೀ ರಾಘವೇಂದ್ರ
ಧರ್ಮ ತೇಜ ಸೂರ್ಯ ಪ್ರಕಾಶ ಕಾಂತಿ ಸ್ವರೂಪ ಶ್ರೀ ರಾಘವೇಂದ್ರ

ಪ್ರಮುಖ ವಿಜ್ಞಾನ ಗಾನ ಗಂಧರ್ವ ಮೌನ ವಚನ ಶ್ರೀ ರಾಘವೇಂದ್ರ
ಪ್ರಜ್ವಲ ಜ್ಯೋತಿ ವಲಯ ದಿವ್ಯ ಸುವರ್ಣ ಕಾಂತ ಶ್ರೀ ರಾಘವೇಂದ್ರ   || ಶ್ರೀ ರಾಘವೇಂದ್ರ ||

Friday, July 15, 2016

ಇದು ಹೊಸ ರಾಗ ಹೊಸ ಹಾಡು ಹೊಸ ಗೀತೆ

ಇದು ಹೊಸ ರಾಗ ಹೊಸ ಹಾಡು ಹೊಸ ಗೀತೆ
ಇದು ಹೊಸ ಭಾವ ಹೊಸ ವೇದ ಹೊಸ ಮಾತು  || ಇದು ಹೊಸ ||

ಇದು ಎಂತಾ ಮಾತಿನ ಮಧುರ ವಚನಗಳ ಸಮ ಭಾವವು
ಇದು ಎಂತಾ ಸ್ವಭಾವದ ಸುಗಂಧ ಕವಿತೆಗಳ ಸುಮಧುರವು

ನನ್ನ ರಾಗದ ಜೀವನ ಸ್ವರ ಗಾನವೇ ಹೊಸ ಗೀತೆಗಳು
ನನ್ನ ಭಾವದ ಜೀವಿತ ವೇದ ಜ್ಞಾನವೇ ಹೊಸ ಮಾತುಗಳು  || ಇದು ಹೊಸ ||

ಈ ಸ್ವರ ರಾಗದ ಸ್ವರ ಕೀರ್ತನೆ ಸರ್ವ ಭಾವ ಸಂಗೀತಗಳು
ಈ ಹೊಸ ಸ್ವರ ಭಾವವೇ ನನ್ನ ನೆನಪಿನ ಮಹಾ ರಾಗಗಳು

ಇದು ಎಂತಾ ರಾಗವೋ ನನ್ನ ಧ್ವನಿಯಲ್ಲೇ ಸಪ್ತ ಸ್ವರಗಳು
ಇದು ಎಂತಾ ಗೀತೆವೋ ನನ್ನ ಸ್ವರದಲ್ಲೇ ವೇದ ಗೀತಗಳು  || ಇದು ಹೊಸ || 

Thursday, July 14, 2016

ಮೇಘ ಬಂತು ಮಳೆ ಬಿತ್ತು ಭೂಮಿ ಹಸಿಯಾಯ್ತು

ಮೇಘ ಬಂತು ಮಳೆ ಬಿತ್ತು ಭೂಮಿ ಹಸಿಯಾಯ್ತು 
ಗಾಲಿ ಬೀಸಿದ ಕ್ಷಣವೇ ಮಳೆ ಹೋಯ್ತು ಹಾಗೆ ಮೇಘ ಎಲ್ಲಿಗೋ ಒಂಟೋಯ್ತು  || ಮೇಘ ಬಂತು ||

ಏನೋ ಈ ಗಾಲಿ ಒಂತರ ಏನಾದರು ಅದೊಂತರ
ಈ ಗಾಲಿ ಇಲ್ಲದೆ ಜೀವನ ಕಷ್ಟ ಆಗೊತರ ಆಗಿದೆ 

ಗಾಲಿ ಇಂದೇ ಜೀವ ಉಸಿರು
ಮಳೆ ಇಂದ ಭೂಮಿ ಹಸಿರು 
ಬೆಲೆ ಇಂದ ಜೀವಗೆ ಆಹಾರ
ಶಕ್ತಿ ಇಂದ ಕಾಲ ಮಮಕಾರ  || ಮೇಘ ಬಂತು ||

ಮಳೆ ಸೃಷ್ಟಿಗೆ ಅವಸರ ಜಗತಿಗೆ ನಿತ್ಯವಸರ ಜೀವಕ್ಕೆ ಪ್ರಾಣಾಧಾರ
ಮಳೆ ಭೂಮಿಗೆ ಹಸಿರು ಆದರೆ ಜೀವಗೆ ಆಹಾರ ಪ್ರಾಣಿಗೆ ಸಹಕಾರ

ಗಾಲಿ ಮಳೆ ಜೊತೆ ಆದರೆ ಮೇಘ ಮಹಾ ಭಯಂಕರ ರೂಪ
ಮೇಘ ದ್ವನಿಯ ಮಿಂಚು ಮಹಾ ಶಕ್ತಿಯ ಮಹೋತ್ತರ ಗರ್ಜನೆ   || ಮೇಘ ಬಂತು ||

Tuesday, July 12, 2016

ಇದು ಎಂತಾ ಕ್ಷಣವು

ಇದು ಎಂತಾ ಕ್ಷಣವು
ಇದು ಎಂತಾ ಸಮಯವು
ಮೇಧಾ ಶಕ್ತಿಯಲ್ಲಿ ಭಾವನೇ ಶೂನ್ಯ ವಾದಂತ ಕಾಲ ಸ್ವಭಾವವು  || ಇದು ಎಂತಾ ||

ಭಾವನೆ ಇಲ್ಲದೆ ಜೀವ ಏನೋ ಒಂತರ
ಸ್ವಭಾವವೇ ಇಲ್ಲದ ಮೇಧಾ ಶಕ್ತಿ ಶೂನ್ಯಾಂತರ

ಕಾಲ ಸಾಗಿಸೋ ಭಾವನಗಲೇ ನಮ್ಮ ಜೀವನ ಶೈಲಿ
ವಿಜ್ಞಾನ ನೋಡಿಸೋ ಅನುಭವವೆ ನಮ್ಮ ಜೀವಿತ ಸೂತ್ರ ಶೀಲಿ  || ಇದು ಎಂತಾ ||

ಪ್ರಶ್ನದ ಆಲೋಚನದಿಂದೆ ವಿಜ್ಞಾನ ಪರಮಾರ್ಥ ವಿಶ್ಲೇಷಣ
ಕಾಲದ ಭಾವನದಿಂದೆ ಆಲೋಚನ ಅರ್ಥವಾದಂತ ವಿವರಣ

ಏನೋ ಒಂದು ಅರ್ಥವನ್ನು ಗ್ರಹಿಸೋದರಿಂದ ಮೇಧಾಶಕ್ತಿಯಲ್ಲಿ ಮಹಾ ಜ್ಞಾನ
ಏನೋ ಒಂದು ಆಚರಿಸೋ ಸಿದ್ಧಾಂತವೇ ಪ್ರಮುಖ ವಾದಂತ ಮಹಾ ವಿಜ್ಞಾನ  || ಇದು ಎಂತಾ || 

ಕಾವೇರಿ ನೀನೆ ನನ್ನ ಜೀವಿತ ಶೃಂಗೇರಿ

ಕಾವೇರಿ ನೀನೆ ನನ್ನ ಜೀವಿತ ಶೃಂಗೇರಿ
ಗಂಗೋತ್ರಿ ನೀನೆ ನನ್ನ ಜಲ ಜೀವನ ಕಸ್ತೂರಿ
ಮೈತ್ರೇಯಿ ನೀನೆ ನನ್ನ ಒಳವಿನ ಕಾಲ ಭಾವನಶ್ರೀ  || ಕಾವೇರಿ ||

ನೀನೆ ಜಲದಿಂದ ನದಿಯಾಗಿ ನನ್ನ ಜೊತೆಯಲ್ಲಿ ಸೇರಿದೆ
ನೀನೆ ಹಿಮಗಿರಿ ಇಂದ ಜಲಪಾತವಾಗಿ ನನ್ನ ಜೊತೆ ಆಗಿದೆ

ನೀನೆ ಸಕಲ ಜೀವರಾಶಿಗಳಿಗೆ ಪ್ರಾಣ ಧಾರ
ನೀನೆ ವಿಶ್ವದಲ್ಲಿ ತುಂಬಿದ ಸಾಗರ ಮಳೆ ಧಾರ  || ಕಾವೇರಿ ||

ನದಿಯಿಂದ ಬರ್ತಿರುವ ನೀರೇ ಶುದ್ಧವಾದ ನೀರು
ಹಿಮದಿಂದ ಪ್ರವಾಹವಾದ ನೀರೇ ಪ್ರಶಿದ್ದವಾದ ನೀರು

ಜಲ ಸಂಗಮದಲ್ಲಿ ಸೇರಿದ ನದಿಗಳು ಒಂದೇ ಭಾವನೆ
ಸಂಗಮದ ಸರೋವರ ಪ್ರಾಮುಖ್ಯತವೇ ನಮ್ಮ ಜೀವನ  || ಕಾವೇರಿ || 

Friday, July 8, 2016

ಗಾಲಿ ಇಂದೇ ವೇದ ಮಂತ್ರವಾಗಿ ಬಾರೋ ಕೃಷ್ಣಾ

ಗಾಲಿ ಇಂದೇ ವೇದ ಮಂತ್ರವಾಗಿ ಬಾರೋ ಕೃಷ್ಣಾ
ಶ್ವಾಸ ಇಂದೇ ಸ್ವರ ಜೀವವಾಗಿ ಐಕ್ಯವಾಗೋ ಕೃಷ್ಣಾ   || ಗಾಲಿ ಇಂದೇ ||

ನಿನ್ನ ರೂಪವು ನನ್ನ ನೇತ್ರದಲ್ಲಿ ಮಹೋತ್ತರವಾಗಿ ಏಕವಾಗಿದೆ
ನಿನ್ನ ದೇಹವು ನನ್ನ ಜೀವದಲ್ಲಿ ಸುಂದರ ಸುಗಂಧವಾಗಿ ಸೇರಿದೆ 

ವೇಣುವು ದ್ವನಿಯಲ್ಲೆ ನನ್ನ ತಂಬುರ ಸ್ವರ ಹೇಳೋ ಗೋಪಾಲ 
ಆಕಾಶ ಪ್ರತಿಬಿಂಭದ ನಿನ್ನ ಪ್ರತಿರೂಪವೇ ನೀಲಿ ಮೇಘ ಶ್ಯಾಮ  || ಗಾಲಿ ಇಂದೇ ||

ಅಮರ ನಾಯಕ ಅನನ್ಯ ದಾಯಕ ಬಾರೋ ಮುರಳೀ ಮೋಹನ ಕೃಷ್ಣ
ವಿಶ್ವ ಧಾರಕ ಧರ್ಮ ತೇಜಕ ಬಾರೋ ನನ್ನ ಒಳವಿನ ವರ್ಣ ರತ್ನಾಕರ

ಸುವರ್ಣ ಗಿರಿವಾಸ ಸುಂದರ ಅರಣ್ಯ ನಿವಾಸ ಪ್ರಜ್ಞಾನ ಪರಂಧಾಮ
ದೇಹ ಧಾರ್ಮಿಕ ದೈವ ಧಾರಕ ನೀನೆ ನನ್ನ ಜೀವನ ಸ್ವರ ಮನೋಹರ  || ಗಾಲಿ ಇಂದೇ || 

Wednesday, July 6, 2016

ಒಳವ ಜೀವ ಇರುವರಿಗೆ ಜೀವನ ಎಲ್ಲಾ ಸಂತೋಷ

ಒಳವ ಜೀವ ಇರುವರಿಗೆ ಜೀವನ ಎಲ್ಲಾ ಸಂತೋಷ
ಒಳವ ಜೀವ ಇರುವರಿಗೆ ಜೀವಿತ ಎಲ್ಲಾ ಸುಮಧುರ   || ಒಳವ ಜೀವ ||

ಜೀವ ಜೊತೆಯಲ್ಲಿ ಇದ್ದರೆ ಎಲ್ಲಾ ಸುಖವಾದ ಜೀವನ
ಜೀವ ಜೊತೆಯಲ್ಲಿ ಇದ್ದರೆ ಎಲ್ಲಾ ಸುಂದರವಾದ ಜೀವಿತ

ವಿಶ್ವದಲ್ಲಿ ಏನು ಇರಲಿ ಜೀವಿಗೆ ಜೀವ ಇರುವರಿಗೆ ಆನಂದ
ಜಗತಿನಲ್ಲಿ ಏನು ಇರಲಿ ಪ್ರತಿ ಜೀವಿಗೆ ಆರೋಗ್ಯವೇ ಅಪುರೂಪ   || ಒಳವ ಜೀವ ||

ಜೀವಗೆ ಉತ್ಸಾಹ ಕೊಡುವ ಸೂರ್ಯೋದಯವೇ ನಮ್ಮ ಕಾರ್ಯ ವಿಜ್ಞಾನ
ಜೀವಗೆ ವಿಶ್ರಾಂತಿ ಕೊಡುವ ಚಂದ್ರ ಸಮಯವೇ ನಮ್ಮ ದೇಹದ ಮಹಾ ಶಕ್ತಿ

ಸೃಷ್ಟಿಯಲ್ಲಿ ಏನಾದರೂ ನೋಡ ಬೇಕಾಗಿದ್ದರೆ ಜೀವವೇ ಅತ್ಯಂತ ಮೂಲ್ಯವು
ಲೋಕದಲ್ಲಿ ಎಲ್ಲಾದರೂ ಹೋಗು ಬೇಕಾಗಿದ್ದರೆ ಜೀವವೇ ಪ್ರಯಾಣ ಸೌಕರ್ಯ  || ಒಳವ ಜೀವ || 

ಏನಾದರು ಹೇಳಿ ಎಂತಾದರು ಹೇಳಿ

ಏನಾದರು ಹೇಳಿ ಎಂತಾದರು ಹೇಳಿ
ಏನು ಇಲ್ಲದೆ ವಿಜ್ಞಾನ ಶೂನ್ಯವಾಗಿದೆ
ಮೇಧಾ ಶಕ್ತಿ ಯಲ್ಲಿ ಖಾಲಿ ಪ್ರದೇಶ ಅನಂತವಾಗಿದೆ  || ಏನಾದರು ||

ಎಲ್ಲಾದರೂ ಹೇಳಿ ಏನಾದರು ಹೇಳಿ
ಎಂತಾದರು ಎಂತಾ ಸಮಯದಲ್ಲಾದರೂ ಹೇಳಿ
ಏನೂ ಇಲ್ಲದೆ ನನ್ನ ಜೀವನ ಮರಣವಾಗಿ ಹೋಗಿದೆ

ಏನೋ ಒಂದು ಗ್ರಹಿಸೋ ಮೇಧಾ ಶಕ್ತಿಗೆ ವಿಶ್ರಾಂತಿ ಇಲ್ಲವೇ
ಏನೋ ಒಂದು ಗಮನಿಸೋ ಅಭ್ಯಾಸ ಮೇಧಾ ಶಕ್ತಿಗೆ ಇದೆ
ಏನೋ ಒಂದು ಆಲೋಚನ ಮಾಡೋನಂತ ಉತ್ಸಾಹ ಇರು ಬೇಕಾಗಿದೆ  || ಏನಾದರು ||

ಜೀವ ಇರುವರಿಗೆ ಏನೋ ಒಂದು ಸಹಾಸ ಮಾಡೋ ಅಭಿಲಾಷ
ಜೀವ ಕೋರಿದ ಕಾರ್ಯವೇ ನೆರವೇರಿಸೋ ಉತ್ಸಾಹ ಸಹಾಸ
ಜೀವದಲ್ಲೇ ಮಹಾ ಶಕ್ತಿಯ ದೀಕ್ಷಾ ದಕ್ಷ ಪ್ರಜ್ಞಾನ ಪರಿಶೋದನ

ಏನೋ ಒಂದು ಸಹಾಸ ಏನೋ ಒಂದು ಹೊಸಾ ವಿಶೇಷ
ಏನೋ ಒಂದು ಮಹಾ ಕಾರ್ಯ ಏನೋ ಒಂದು ನವ ಜೀವನ ಅದ್ಭುತ
ಏನೋ ಒಂದು ಆಶ್ಚರ್ಯ ಏನೋ ಒಂದು ಮಹಾ ವಿಜ್ಞಾನ ಪ್ರಖ್ಯಾತ     || ಏನಾದರು || 

Tuesday, June 28, 2016

ಎಲ್ಲಾದರು ಇರು ಎಂತಾದರು ಇರು

ಎಲ್ಲಾದರು ಇರು ಎಂತಾದರು ಇರು
ಎಲ್ಲಿದ್ದರು ನೀನು ಕನ್ನಡದ ಕರ್ನಾಟಕದಲ್ಲಿ ಹಿತವಾಗಿ ಇರು  || ಎಲ್ಲಾದರು ||

ಎಲ್ಲಿದ್ದರು ಮಾನವ ಭಾವನ ಒಂದೇ ರೀತಿಯ ನಡಿಯೋ ಜೀವನೆ
ಎಂತಾದರು ಎಲ್ಲಾ ಜೀವಗಳ ಸ್ವಭಾವ ಒಂದೇ ರೀತಿಯ ಜೀವನೆ

ಪ್ರಕೃತಿಯಲ್ಲಿ ಇರೋ ಜಂತುವುಗಳ ಜೀವನ ಭಾವನಗಳು ನಮ್ಮ ವಿಜ್ಞಾನ
ವಿಶ್ವದಲ್ಲಿ ಇರೋ ರೂಪ ಆಕಾರ ಚಿತ್ರ ವಸ್ತುವು ಗಳೆಲ್ಲ ನಮ್ಮ ನೈಪುಣ್ಯವೆ   || ಎಲ್ಲಾದರು ||

ಎಂತೆಂತ ಕಷ್ಟಗಳು ಬಂದಿರುವ ನೀನು ನೆಮ್ಮದಿವಾಗೇ ಜೀವನ ಮಾಡೋ
ಕಷ್ಟಗಳ ಪ್ರತಿಫಲ ಎಲ್ಲವೂ ನಿನ್ನ ಜೀವನ ಕಾಲದ ಸತ್ಯ ಧರ್ಮ ಪ್ರಭಾವವೇ

ಎಲ್ಲಿದ್ದರೂ ನಿನಗೆ ಕಷ್ಟಗಳು ಮಹಾ ವಿಜ್ಞಾನ ಅನುಭವ ಭಾವನಗಳು
ಎಂತಾದರೂ ನಿನಗೆ ಸೇರಿದಂತಾ ಮಹಾ ಕ್ಷೇತ್ರದ ಆಳಯ ವರಗಳು  || ಎಲ್ಲಾದರು ||

Thursday, June 16, 2016

ನೀನು ನನ್ನ ನೋಡಿದ ಕ್ಷಣವೇ

ನೀನು ನನ್ನ ನೋಡಿದ ಕ್ಷಣವೇ
ನಾನು ನಿನ್ನ ನೋಡಿದ ಸಮಯವೇ
ನಾನು ನೀನು ಒಂದಾಗಿದ ಕಾಲ ಭಾವನವೆ ಈ ಕಲ್ಯಾಣ ನಮ್ಮ ಜೀವನ || ನೀನು ನನ್ನ ||

ನೀನು ಎಲ್ಲಿದ್ದರು ನಾನು ನಿನ್ನ ಜೊತೆಯಲ್ಲೇ ಇರು ಬೇಕಂತ ನಿರ್ಣಯ ಆಗಿದೆ
ನಿನ್ನ ನನ್ನ ಪ್ರಶ್ನವು ಉತ್ತರು ಒಂದಾಗಿ ಸರಿ ಹೋದರೇನೆ ಸಂತೋಷ ಜೀವನೆ

ನೀನು ಹೇಗಿದ್ದರು ನಾನು ನಿನ್ನ ಮಾರ್ಗದಲ್ಲೇ ನಡಿಬೇಕಂತ ನ್ಯಾಯ ಮಾಡಿದರೆ
ನಿನ್ನ ನನ್ನ ಸಂಭಾಷಣಗಳು ಒಂದಾಗಿ ಒಪ್ಪಿಕೆ ಆದರೆ ಆನಂದವಾದ ಜೀವನೆ    || ನೀನು ನನ್ನ ||

ನಿನ್ನಲ್ಲಿ ನಾನು ಒಂದಾಗಿ ಇರು ಬೇಕಂತ ಮನಸ್ಸಲ್ಲಿ ನನಿಗೆ ಇಕ್ಯ ವಾಗಿದೆ
ನೀನು ಏನು ಹೇಳಿದ್ದರೂ ನನಿಗೆ ಒಪ್ಪಿಕೆ ಆಗಿದಂತ ಭಾವನೆ ನನ್ನ ಆಲೋಚನೆ

ನೀನು ನಾನು ಜೊತೆ ಆಗಿದಂತ ಜೀವನವೇ ನಮ್ಮ ಜೀವಿತ ಸಂಭಾಷಣ
ನೀನು ನಾನು ಒಂದಾಗಿ ಜೀವನ ಮಾಡು ಬೇಕಾದಂತೆ ಈ ಕಾಲದ ಸೂಚನ   || ನೀನು ನನ್ನ || 

Wednesday, June 15, 2016

ನಿನ್ನಲ್ಲಿ ಏನಿದೆ ನನ್ನಲ್ಲಿ ಏನಿದೆ

ನಿನ್ನಲ್ಲಿ ಏನಿದೆ ನನ್ನಲ್ಲಿ ಏನಿದೆ
ನೀನು ನಾನು ಒಂದಾಗಿದರೂ ನಮ್ಮಲ್ಲಿ ಏನಿದೆ
ಜೀವನದ ಜೀವಿತದ ಮಾರ್ಗ ಸೂತ್ರವೇ ನಮ್ಮಲ್ಲಿ ಇದೆ  || ನಿನ್ನಲ್ಲಿ ಏನಿದೆ ||

ನಿನಗಾಗಿ ನನ್ನ ಹೃದಯದಲ್ಲಿ ಸುಮಗಂಧ ತುಂಭಿದೆ
ನಿನಗಾಗಿ ನನ್ನ ಮನಸಲ್ಲಿ ಸುಮಧುರ ಆಗೆದೆ
ನಿನಗಾಗಿ ನನ್ನ ವಯಸಿನ ಮಕರಂದ ಅರಳಿದೆ

ನೀನೆ ನನ್ನ ಜೋತೆಯದ ವಿಶ್ವ ಭಾವನೆ
ನೀನೆ ನನ್ನ ಮಿತ್ರದ ಪ್ರಕೃತಿ ಸ್ವಭಾವವೆ
ನೀನೆ ನನ್ನ ಹಿತವಾದ ದಿವ್ಯ ಗುಣ ಸ್ಪರ್ಶವೆ  || ನಿನ್ನಲ್ಲಿ ಏನಿದೆ ||

ನಿನಗಾಗಿ ನಾನು ಎಲ್ಲಾದರು ನಡಿಯೋದು
ನಿನಗಾಗಿ ನಾನು ಏನಾದರು ಕೊಡಬೋದು
ನಿನಗಾಗಿ ನಾನು ಎಂಗಾದರು ಇರುಬೋದು

ನೀನೆ ನನ್ನ ಜೀವನ ನೀನೆ ನನ್ನ ಭಾವನ
ನೀನೆ ನನ್ನ ಬಂಧನ ನೀನೆ ನನ್ನ ಇಂದನ
ನೀನೆ ನನ್ನ ವೇದನ ನೀನೆ ನನ್ನ ಚಂದನ || ನಿನ್ನಲ್ಲಿ ಏನಿದೆ ||

ನೀನೆ ನನ್ನ ದೇಹ ನೀನೆ ನನ್ನ ಮೋಹ

ನೀನೆ ನನ್ನ ದೇಹ ನೀನೆ ನನ್ನ ಮೋಹ
ನೀನೆ ನನ್ನ ರೂಪ ನೀನೆ ನನ್ನ ಚಿತ್ರ    || ನೀನೆ ನನ್ನ ||

ನೀನೆ ನನ್ನ ಶ್ವಾಸದ ಭಾವನ ರೂಪವು
ನೀನೆ ನನ್ನ ಹೃದಯದ ಸ್ವಪ್ನ ಚಿತ್ರವು 

ನೀನೆ ನನ್ನ ಜೊತೆ ಜೀವವು ನೀನೆ ನನ್ನ ಜೋಡಿ ಪ್ರಾಣವು
ನೀನೆ ನನ್ನ ಸ್ವಪ್ನ ಲೋಕವು ನೀನೆ ನನ್ನ ನಡಿಸೋ ಧ್ಯಾಸವು   || ನೀನೆ ನನ್ನ ||

ನೀನೆ ನನ್ನ ಅನುಬಂಧದ ಅನುರಾಗವು
ನೀನೆ ನನ್ನ ಚೈತ್ರದ ಸಿಂಧೂರವು

ನೀನೆ ನನ್ನ ಸುಮಧುರ ಸುಗಂಧವು
ನೀನೆ ನನ್ನ ಶೃತಿ ಲಯದ ಸ್ವರವು    || ನೀನೆ ನನ್ನ || 

ಮಧುರದಲ್ಲಿ ಏನಿದೆ ಹೃದಯದಲ್ಲಿ ಏನಿದೆ

ಮಧುರದಲ್ಲಿ ಏನಿದೆ ಹೃದಯದಲ್ಲಿ ಏನಿದೆ
ಮನಸಲ್ಲಿ ಏನಿದೆ ನಿನ್ನ ವಯಸಲ್ಲಿ ಏನಿದೆ  || ಮಧುರದಲ್ಲಿ ||

ಮಧುರ ಕ್ಷಣದಲ್ಲಿ ನಿನ್ನ ಹೃದಯ ಏನಾಗಿದೆ
ಮೋಹನ ವಯಸಲ್ಲಿ ನಿನ್ನ ಮನಸ್ಸು ಏನು ಹೇಳಿದೆ

ಏ ಕ್ಷಣದ ಮೋಹವೋ ಆ ಕ್ಷಣದಲ್ಲೇ ನಿನಗೆ ಅನುಭವ ಇರಲಿ
ಏ ಸಮಯದ ಮಧುರವೊ ಆ ಭಾವನೆ ನಿನಗೆ ವಿಜ್ಞಾನ ಆಗಲಿ || ಮಧುರದಲ್ಲಿ ||

ಮಧುರದ ಮಕರಂದ ಅರಳಿದ ಬೀಜದ ಸುಮಗಂಧ
ಹೃದಯದ ಸಂತೋಷ ಚಲುವಿನ ಚಿತ್ರದ ಅಭಿಲಾಷ

ಮೋಹ ವರ್ಣದ ಸುಮಧುರವೇ ನಿನ್ನ ಛಾಯ ದೇಹವು
ನಿನ್ನ ವರ್ಣ ತೇಜದ ಭಾವನೆ ನನ್ನ ಜೀವನ ಜೊತೆ ರೂಪವು  || ಮಧುರದಲ್ಲಿ ||

ಮಧುರದಲ್ಲಿ ಮೌನವೇ ಇರಲಿ ಮೋಹನದಲ್ಲಿ ಒಪ್ಪಿಕೆ ಆಗಲಿ

ಮಧುರದಲ್ಲಿ ಮೌನವೇ ಇರಲಿ ಮೋಹನದಲ್ಲಿ ಒಪ್ಪಿಕೆ ಆಗಲಿ
ಮನಸಲ್ಲಿ ಆಲೋಚನೆ ಇರಲಿ ವಯಸಲ್ಲಿ ಹೆಚ್ಚರಿಕೆ ಬರಲಿ     || ಮಧುರದಲ್ಲಿ ||

ಜೀವಿತದಲ್ಲಿ ಮಧುರ ವಿಶೇಷವೋ ಜೀವನದಲ್ಲಿ ಮೋಹನ ವಿಷಯವೋ
ಜೊತೆಯಲ್ಲಿ ಇರೋ ಸಂಧರ್ಭವೆ ಜೀವನ ಕಾಲದ ಜೀವಿತ ಸಮಯವೂ  

ಹೃದಯದಲ್ಲಿ ಮೋಹನ ಇರುವಾಗ ಆಲೋಚನದಲ್ಲಿ ಅನುಭವ ಇರಲಿ
ವಯಸಲ್ಲಿ ತೊಂದ್ರೆ ಇರುವಾಗ ಮನಸಲ್ಲಿ ಸಮಯ ಭಾವನೆ ಇರಲಿ    || ಮಧುರದಲ್ಲಿ ||

ಅನುಭವವೇ ನಮ್ಮ ಜೀವಿತೆ ಅನುಬಂಧವೆ ನಮ್ಮ ಜೀವನೆ 
ಬಂಧನದಲ್ಲಿ ಇರೋ ಜೀವನ ಕಾರ್ಯಗಳೇ ನಮ್ಮ ಸಂಪ್ರದಾಯವೂ

ವಯಸಿಂದೆ ಬರುತಿದೆ ನಮ್ಮ ಸಂಸ್ಕೃತಿ ಮನಸಿಂದೆ ನೋಡಿ ನಮ್ಮ ಅಭಿರುಚಿ
ಪ್ರತಿ ಜೀವಿಗೆ ಮಧುರ ಮೋಹನ ಕ್ಷಣ ಇರಲಿ ಪ್ರತಿ ವಯಸಿಗೆ ಅನುಭವದ ಕಾಲ ವಿಜ್ಞಾನ ಬರಲಿ || ಮಧುರದಲ್ಲಿ ||

ಎಲ್ಲೆಲ್ಲಿ ನೋಡಲಿ ಕಾನದೆ ನಿನ್ನಂತ ಸೌಂದರ್ಯ

ಎಲ್ಲೆಲ್ಲಿ ನೋಡಲಿ ಕಾನದೆ ನಿನ್ನಂತ ಸೌಂದರ್ಯ
ಎಲ್ಲೇಲ್ಲಿ ನೋಡಲಿ ಕಾನದೆ ನಿನ್ನಂತ ಶೃಂಗಾರ
ಎಲ್ಲೆಲ್ಲಿ ನೋಡಲಿ ನಿನ್ನ ಅಪುರೂಪದ ಶಿಲ್ಪ ಕಳ ಚಿತ್ರಗಳೇ  || ಎಲ್ಲೆಲ್ಲಿ ನೋಡಲಿ ||

ಈ ಜಗತಿನಲ್ಲಿ ಏನಿರಲಿ ನಿನ್ನ ರೂಪವೇ ನನ್ನ ಜೀವನ
ಈ ವಿಶ್ವದಲ್ಲಿ ಏನಿರಲಿ ನಿನ್ನ ಅಭಿಲಾಷವೆ ನನ್ನ ಜೀವಿತ

ನೋಡಿದನೆ ನಾನು ನಿನ್ನ ಮನಸಿನ ಮೋಹನ
ಕಾನಿದೆ ನಿನ್ನ ಭಾವನ ನನ್ನ ಕನ್ನಲ್ಲಿ ಚಲುವಿನ  || ಎಲ್ಲೆಲ್ಲಿ ನೋಡಲಿ ||

ಸುಮಧುರದ ಸುಗಂಧದ ಚಿತ್ರವ ನೀನು
ಸುಲೋಚನದ ಸುಮಿತ್ರದ ಚೈತ್ರವೇ ನೀವು

ಈ ಮಣ್ಣಿನಲ್ಲಿ ನೀನೆ ಮಾಣಿಕ್ಯವು ನೀನೆ ಮುತ್ಯವು
ಈ ಭೂಮಿ ಮೇಲೆ ನೀನೆ ಮದುರವು ನೀನೆ ಮೋಹನವು  || ಎಲ್ಲೆಲ್ಲಿ ನೋಡಲಿ || 

ಜೊತೆಯಲ್ಲಿ ನಿನ್ನ ಜೊತೆಯಲ್ಲಿ ನಾನು ಸೇರಿದಂತೆ

ಜೊತೆಯಲ್ಲಿ ನಿನ್ನ ಜೊತೆಯಲ್ಲಿ ನಾನು ಸೇರಿದಂತೆ
ಜೊತೆಯಲ್ಲಿ ನನ್ನ ಜೊತೆಯಲ್ಲಿ ನೀನು ಸೇರಿದಂತೆ
ಈ ಈ ಈ ... ಜೊತೆಯಲ್ಲಿ ಇರೋ ಸಂಭಾಷಣೆ ನಮ್ಮ ಕನಸಿನ ನೆನಪುಗಳು  || ಜೊತೆಯಲ್ಲಿ ||

ಈ ಜೊತೆಯಲ್ಲಿ ಇರೋ ಅಭಿಪ್ರಾಯಗಳೇ ನಮ್ಮ ಜೀವನ ಭಾವನಗಳು
ಈ ಜೊತೆಯಲ್ಲಿ ಇರೋ ಅನುಭಂದವೇ ನಮ್ಮ ಜೀವಿತ ಸಂಭಂಧಗಳು
ನಮ್ಮ ಕನ್ನಡ ಕಾಲ ದೇಶ ರಾಜ್ಯವೇ ಈ ಜೊತೆಯಲ್ಲಿ ಇರೋ ಜೀವನ
ನಮ್ಮ ಕನ್ನಡ ಕಾಲ ಭಾಷ ಪ್ರಭಾವೆ ಈ ಜೊತೆಯಲ್ಲಿ ಇರೋ ಜೀವಿತ  || ಜೊತೆಯಲ್ಲಿ ||

ನಮ್ಮ ಜೀವನದಲ್ಲಿ ಏನಾಗಿದರು ಒಂದಾಗಿ ಕಾಲದಿಂದ ನಡಿಬೇಕಾಗಿದೆ
ನಮ್ಮ ಜೆವಿತನಲ್ಲಿ ಏನಿರಲು ನಾವು ನಮ್ಮ ಸಂಸಾರ ಸಾಗಿಸಬೇಕಾಗಿದೆ
ನೀನು ನಾನು ಇರೋ ವರಿಗೆ ಈ ಪ್ರೀತಿ ತೃಪ್ತಿ ಜೊತೆಯಲ್ಲೇ ಇರುತಿದ್ದೆ
ನೀನು ನಾನು ಸಂತೋಷ ದಿಂದ ನೂರು ವರ್ಷದ ಕಾಲ ನಮಗಾಗಿದೆ   || ಜೊತೆಯಲ್ಲಿ ||