Showing posts with label ಮಂತ್ರ. Show all posts
Showing posts with label ಮಂತ್ರ. Show all posts

Friday, July 8, 2016

ಗಾಲಿ ಇಂದೇ ವೇದ ಮಂತ್ರವಾಗಿ ಬಾರೋ ಕೃಷ್ಣಾ

ಗಾಲಿ ಇಂದೇ ವೇದ ಮಂತ್ರವಾಗಿ ಬಾರೋ ಕೃಷ್ಣಾ
ಶ್ವಾಸ ಇಂದೇ ಸ್ವರ ಜೀವವಾಗಿ ಐಕ್ಯವಾಗೋ ಕೃಷ್ಣಾ   || ಗಾಲಿ ಇಂದೇ ||

ನಿನ್ನ ರೂಪವು ನನ್ನ ನೇತ್ರದಲ್ಲಿ ಮಹೋತ್ತರವಾಗಿ ಏಕವಾಗಿದೆ
ನಿನ್ನ ದೇಹವು ನನ್ನ ಜೀವದಲ್ಲಿ ಸುಂದರ ಸುಗಂಧವಾಗಿ ಸೇರಿದೆ 

ವೇಣುವು ದ್ವನಿಯಲ್ಲೆ ನನ್ನ ತಂಬುರ ಸ್ವರ ಹೇಳೋ ಗೋಪಾಲ 
ಆಕಾಶ ಪ್ರತಿಬಿಂಭದ ನಿನ್ನ ಪ್ರತಿರೂಪವೇ ನೀಲಿ ಮೇಘ ಶ್ಯಾಮ  || ಗಾಲಿ ಇಂದೇ ||

ಅಮರ ನಾಯಕ ಅನನ್ಯ ದಾಯಕ ಬಾರೋ ಮುರಳೀ ಮೋಹನ ಕೃಷ್ಣ
ವಿಶ್ವ ಧಾರಕ ಧರ್ಮ ತೇಜಕ ಬಾರೋ ನನ್ನ ಒಳವಿನ ವರ್ಣ ರತ್ನಾಕರ

ಸುವರ್ಣ ಗಿರಿವಾಸ ಸುಂದರ ಅರಣ್ಯ ನಿವಾಸ ಪ್ರಜ್ಞಾನ ಪರಂಧಾಮ
ದೇಹ ಧಾರ್ಮಿಕ ದೈವ ಧಾರಕ ನೀನೆ ನನ್ನ ಜೀವನ ಸ್ವರ ಮನೋಹರ  || ಗಾಲಿ ಇಂದೇ ||