Showing posts with label ಲೋಕ. Show all posts
Showing posts with label ಲೋಕ. Show all posts

Wednesday, June 15, 2016

ನೀನೆ ನನ್ನ ದೇಹ ನೀನೆ ನನ್ನ ಮೋಹ

ನೀನೆ ನನ್ನ ದೇಹ ನೀನೆ ನನ್ನ ಮೋಹ
ನೀನೆ ನನ್ನ ರೂಪ ನೀನೆ ನನ್ನ ಚಿತ್ರ    || ನೀನೆ ನನ್ನ ||

ನೀನೆ ನನ್ನ ಶ್ವಾಸದ ಭಾವನ ರೂಪವು
ನೀನೆ ನನ್ನ ಹೃದಯದ ಸ್ವಪ್ನ ಚಿತ್ರವು 

ನೀನೆ ನನ್ನ ಜೊತೆ ಜೀವವು ನೀನೆ ನನ್ನ ಜೋಡಿ ಪ್ರಾಣವು
ನೀನೆ ನನ್ನ ಸ್ವಪ್ನ ಲೋಕವು ನೀನೆ ನನ್ನ ನಡಿಸೋ ಧ್ಯಾಸವು   || ನೀನೆ ನನ್ನ ||

ನೀನೆ ನನ್ನ ಅನುಬಂಧದ ಅನುರಾಗವು
ನೀನೆ ನನ್ನ ಚೈತ್ರದ ಸಿಂಧೂರವು

ನೀನೆ ನನ್ನ ಸುಮಧುರ ಸುಗಂಧವು
ನೀನೆ ನನ್ನ ಶೃತಿ ಲಯದ ಸ್ವರವು    || ನೀನೆ ನನ್ನ ||